ನಾಗಮಂಗಲ. ಜೂ:- 21 ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಕೆ.ಲೋಕೇಶ್ ರವರು ಯೋಗ ದೀಪ ಹಚ್ಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಶ್ವೇತ ಉಡುಪಿನಲ್ಲಿ ಹಾಜರಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ ಕೆ.ಬಿ. ಮುಂಜುನಾಥ್ ರವರ ನಿರ್ದೇಶನದಲ್ಲಿ, ಕಾಲೇಜಿನ ಸಹ ಗ್ರಂಥಪಾಲಕರಾದ ಯೋಗ ಪಟು ಎನ್. ಟಿ. ವಿಜಯ ಕುಮಾರ್ ರವರು ಯೋಗ ಮಾಡಿಸುವ ಮೂಲಕ ವಿದ್ಯಾರ್ಥಿಗಳು ಯೋಗ ಪ್ರದರ್ಶನ ಮಾಡಿದರು.


