ನಾಗಮಂಗಲ .ನ.16.ಶ್ರೀ ಆದಿಚುಂಚನಗಿರಿ ಕಲಾಮತ್ತು ವಾಣಿಜ್ಯ ವಿಜ್ಞಾನ ವಿಭಾಗ ಕಾಲೇಜಿನಲ್ಲಿ ಒಂದು ವಾರಗಳ ಕಾಲ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ & ವಿಜ್ಞಾನ ಕಾಲೇಜಿನಲ್ಲಿ "ದಿನಾಂಕ 15-11-2021 ರಿಂದ 20-11-2021 ರ ವರೆಗೆ
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ" ಕಾರ್ಯಕ್ರಮ ಆಯೋಜಿಸಲಾಗಿದ್ದು ಪುಸ್ತಕ ಪರಿಚಯ, ಗ್ರಂಥಗಳಿಗೆ ಸಂಬಂಧಿಸಿದಂತೆ ರಸಪ್ರಶ್ನೆ ಕಾರ್ಯಕ್ರಮ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮಗಳನ್ನು ಒಂದು ವಾರಗಳ ಕಾಲ ಆಯೋಜಿಸಲಾಗಿದೆ.
15 -11 -2021 ರಂದು ಕಸ್ತೂರಬಾ ಆಶ್ರಮದ ಟ್ರಸ್ಟಿ ಪ್ರೊ.ಜಿ. ಬಿ. ಶಿವರಾಜು ರವರು ಸಪ್ರಾ ಹ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ದಿನಾಂಕ 16-17-2021 ರಂದು ನಾಗಮಂಗಲದ ಸಾಹಿತಿಗಳೂ ನಾಗಮಂಗಲ ತಾಲ್ಲೂಕಿನ 3 ನೇ ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾದ ನಾ.ಸು. ನಾಗೇಶ್ ರವರು ಯಶವಂತ ಚಿತ್ತಾಲರ "ಆಬೋಲ" ಪುಸ್ತಕ ಪರಿಚಯ ಮಾಡಿಕೊಡುವುದರೊಂದಿಗೆ ಈ ಪುಸ್ತಕದ ಸಾರಾಂಶದಲ್ಲಿ ಬರುವ ಸಂದೇಶವನ್ನು ವಿದ್ಯಾಥಿಗಳಿಗೆ ಮನದಟ್ಟು ಮಾಡಿದರು .
ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಕೆ.ಲೋಕೇಶ್ ಅಧ್ಯಕ್ಷತೆ ವಯಿಸಿದ್ದರು, ಗ್ರಂಥಪಾಲಕರಾದ ಬಿ. ಎಲ್. ಕವಿತ ಗ್ರಂಥಾಲಯ ಸಹಾಯಕರಾದ ವಿಜಯ್ ಕುಮಾರ್ ಮತ್ತಿತರು ಹಾಜರಿದ್ದರು.


