WELCOME TO SRI ADICHUNCHANAGIRI COLLEGE OF ARTS AND COMMERCE, NAGAMANGALA

October 28, 2021

ಮಾತಾಡು ಮಾತಾಡು ಕನ್ನಡ

 ನಾಗಮಂಗಲ ಪಟ್ಟಣದ ಆದಿ ಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಹಾಗೂ ಬಿ. ಜಿ. ಎಸ್. ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ *'ಮಾತಾಡು ಮಾತಾಡು ಕನ್ನಡ'* ಹಾಗೂ *'ಕನ್ನಡಕ್ಕಾಗಿ ನಾವು'* ಎಂಬ ಘೋಷಣೆ ಯಡಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಸಾಮೂಹಿಕ ಕನ್ನಡ 'ಗೀತಗಾಯನ' ಕಾರ್ಯಕ್ರಮ ವರ್ಷಡಿಸಲಾಗಿತ್ತು. ಈ ಸಂಧರ್ಭದಲ್ಲಿ ಸ್ವಚ್ಚ ಕನ್ನಡ ಭಾಷಾ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದ್ದು ಅಂತಿಮ ಬಿ. ಕಾಂ. ನ ಮಮತ ಡಿ. ಆರ್. ಪ್ರಥಮ ಬಹುಮಾನ ಪಡೆದರೆ ಪ್ರಥಮ ಪಿಯುಸಿ ಮ ಐ.ಎಲ್. ಸ್ಪಂದನ ದ್ವಿತೀಯ ಬಹುಮಾನ ಪಡೆದರು. SAC ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಕೆ.ಲೋಕೇಶ್ ಮತ್ತು ಬಿ. ಜಿ.ಎಸ್. ಪದವಿ ಪೂರ್ವ ಕಾಲೇಜಿನ ಶಿವ ಸಾಗರ್ ರವರು ಬಹುಮಾನ ವಿತರಿಸಿದರು. ಇದೇ ಸಂಧರ್ಭದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ ಸಂಕಲ್ಪ ಘೋಷಣೆಯ ಪ್ರತಿಜ್ಞಾ ವಿಧಿಯನ್ನು ಸರ್ವರಿಗೂ ಭೋದಿಸಲಾಯಿತು.