SAC College Nagamangala
ನಮ್ಮ ಕಾಲೇಜಿನ ವಿ.ಎಂ.ಸಲ್ಮಾಳಿಗೆ 2 ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ.
2020 - 21 ನೇ ಸಾಲಿನ ಬಿ.ಎಸ್ಸಿ ಪದವಿ ವಿದ್ಯಾರ್ಥಿನಿ V. M. ಸಲ್ಮಾ 4 ಸೆಮಿಸ್ಟರ್ ನ ಕನ್ನಡ ಭಾಷೆಯಲ್ಲಿ ಮೈಸೂರು ವಿ.ವಿ.ನಿಲಯದ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದು ವಿ. ನಾರಯಣ ರಾವ್ ಮೆಮೋರಿಯಲ್ ಗೋಲ್ಡ ಮೆಡಲ್ ಮತ್ತು ಮಳವಳ್ಳಿ ಗಾರೆ ವೀರಯ್ಯ ಎಂಡೋಮೆಂಟ್ ಗೋಲ್ಡ ಮೆಡಲ್ ಎಂಬ 2 ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ ಪಡೆದು ಕಾಲೇಜಿಗೆ ಹೆಸರು ತಂದಿರುತ್ತಾರೆ. ಕುಮಾರಿ ಸಲ್ಮ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಂ. ಕೆ. ಮಂಜುನಾಥ್ ಮತ್ತು ಕನ್ನಡ ವಿಭಾಗದ ಎಲ್ಲಾ ಅಧ್ಯಾಪಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ.

