WELCOME TO SRI ADICHUNCHANAGIRI COLLEGE OF ARTS AND COMMERCE, NAGAMANGALA

July 26, 2021

ನಿರ್ವಿಘ್ನತೆಗಾಗಿ ಕಾಲೇಜಿನಲ್ಲಿ ಗಣಪತಿಹೋಮ

ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ನಾಗಮಂಗಲ

ಇಂದು ಪದವಿ ವಿದ್ಯಾರ್ಥಿಗಳಿಗೆ ವಿದ್ಯುಕ್ತವಾಗಿ ತರಗತಿಗಳನ್ನು ಆರಂಭಿಸಲಾಯಿತು. ಕಳೆದ ಎರಡು ಹಂತದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಲೀ ಸಿಬ್ಬಂದಿವರ್ಗದವರಿಗಾಗಲಿ ಕೋವಿಡ್ ನಿಂದ ಯಾವುದೇ ಅನಾಹುತಗಳು ಆಗಲಿಲ್ಲ.ಮುಂದೆಯೂ ಸಹ ಯಾವುದೇ ಅನಾನುಕೂಲಗಳ ಆಗದಿರಲಿ ಎಂದು ನಿರ್ವಿಘ್ನತೆಗಾಗಿ ಕಾಲೇಜಿನಲ್ಲಿ ಗಣಪತಿಹೋಮ ದೊಂದಿಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ಪೂಜೆ ಮತ್ತು ಹೋಮದಲ್ಲಿ ಭಾಗಿಯಾದ ವಿದ್ಯಾರ್ಥಿಗಳುವಿಘ್ನೇಶ್ವರನಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ 10:20 ಗಂಟೆಗೆ ಸರಿಯಾಗಿ ಪ್ರಾರ್ಥನೆಗೆ ತೆರಳಿದರು. ಪ್ರಾರ್ಥನೆ ನಂತರ ತರಗತಿಗಳನ್ನು ಆರಂಭಿಸಲಾಯಿತು. ಪ್ರಾರ್ಥನಾ ಸಭೆಯಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಗಳನ್ನು ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಮತ್ತು ಕಾಲೇಜಿನಲ್ಲಿ ಅಳವಡಿಸಿರುವ ಸ್ಥಾನಿ ಟೈಸರ್ ಬಳಕೆ ಮಾಡಿಕೊಳ್ಳಬೇಕು ಮತ್ತು vaccination ಮಾಡಿಸದವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಬರಬೇಕೆಂದು ಸೂಚನೆ ನೀಡಲಾಯಿತು.